ಓ ಮಾನವ ! ಕೊನೆಗೂ ನಿನ್ನ ಸಾವಿಗಾದವರು ಯಾರಯ್ಯ?
ವೈರಾಣು ನಿನ್ನಿಂದ ಜಗತ್ತೇ ಹೈರಾಣು
ಲಸಿಕೆ ಎಂಬುದು ಹುಸಿ ಆಗಿದೆ,
ಎತ್ತ ನೋಡಿದರತ್ತ ನಾನು ನನ್ನದು
ನನ್ನಿಂದಲೇ ಎಂಬ ಅಹಂಕಾರ ಕುರುಡು
ಮನುಕುಲದಿ ತುಂಬಿತ್ತು ಅಂಧಕಾರ, ಮಮಕಾರವಿಲ್ಲದ ಜೀವನ ನಶ್ಚರವಾಗಿದೆ.
ಜ್ಞಾನ - ಅಜ್ಞಾನಗಳ ನಡುವೆ ಸಂಸ್ಕಾರ ಕಣ್ಣಿಗೆ ಕಂಡರೂ ಕುರಡಾಗಿದೆ,
ಮುಖ ಮುಚ್ಚಿ ಹೊರಗೆ ಹೋಗಲೇನು ಭಯದಿ ಮುಸುಕು ಹಾಕಿರುವೆ.
ಸಂಧಿ-ಗೊಂದಿಗಳ ನಡುವೆ ಹೊರಗೆ ಹೋಗುವ ಸರದಿ, ಆದರೂ ಕಾಯುತ್ತ ಕುಳಿತಿದೆ ಕಾಣದ ಮೃತ್ಯು ಕೂಪ
ಹೊರಗೆ ಹೋದರೆ ಆರು -ಮೂರಡಿ ಸಮಾಧಿ,
ಗೋಡೆಗಳ ನಡುವೆ ಏನಿದು ಪ್ರಪಂಚ?
ಕ್ರಿಯೆ-ಅಂತ್ಯ ಕ್ರಿಯಗಳ ನಡುವೆ ಮರೆತು ಬಿಟ್ಟಿದೆ ನನ್ನೊಳಗಿನ -ನಿನ್ನೊಳಗಿನ ಸಮಾಚಾರ -ವ್ಯವಹಾರ
ಭೂಮಿಯ ಕೊರೆದು ಮೆರೆದು ಬಿಟ್ಟೆ -ಆಕಾಶದಲ್ಲಿ ಹಾರಾಡಿ ಹಾರಾಡಿ ಹರಡಿದೆಯ.
ಓ ಮಾನವ ! ಕೊನೆಗೂ ನಿನ್ನ ಸಾವಿಗಾದವರು ಯಾರಯ್ಯ?
- ರೋಹಿತಕುಮಾರ
ಕೊಪ್ಪಳ.
No comments:
Post a Comment